Home » Communication » NAADA KACHERI (ನಾಡಕಚೇರಿ)
NAADA KACHERI (ನಾಡಕಚೇರಿ) Apk

NAADA KACHERI (ನಾಡಕಚೇರಿ) 9.6 APK

  • Version: 9.6
  • File size: 7.52MB
  • Requires: Android 4.1+
  • Package Name: naada.kacheri
  • Developer: S.N.INFOMEDIA
  • Updated Oct 12, 2019
  • Price: Free
  • Rate 4.10 stars – based on 1254 reviews
NAADA KACHERI (ನಾಡಕಚೇರಿ) App

ನಿಮ್ಮ ಮೊಬೈಲ್ ಸಂಖ್ಯೆಯನ್ನು ದೃಢೀಕರಣ ಮಾಡಿ. ನಂತರ NEW REQUEST ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಸೇವೆಗಳ ಅರ್ಜಿಯನ್ನು ತುಂಬಬಹುದು.ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಆಧಾರ ಸಂಖ್ಯೆ ನಮೂದಿಸಿ ಹುಡುಕಿದಾಗ ನಿಮ್ಮ ಹೆಸರು ಬರುತ್ತದೆ. ಆಗ ಅಲ್ಲಿರುವ ಸೂಚನೆಗಳ ಅನುಸಾರ ನಿಮ್ಮ ಅರ್ಜಿಯನ್ನು ತುಂಬಬೇಕು.

ಜಾತಿ, ಆದಾಯ ಪತ್ರ ಪಡೆಯಲು ಲಂಚ ಕೊಡಬೇಕಾಗಿಲ್ಲ, ಸರತಿ
ಸಾಲಲ್ಲಿ ನಿಲ್ಲಬೇಕಿಲ್ಲ, ಆನ್ಲೈನ್ ಅರ್ಜಿ ಹೇಗೆ ತುಂಬುವುದು ತಿಳಿದುಕೊಳ್ಳಿ
ಇಲ್ಲಿಯವರೆಗೆ ಕೇವಲ ನಾಡಕಛೇರಿ ಹಾಗು ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಜಾತಿ, ಆದಾಯ, ನಿವಾಸಿ ಪ್ರಮಾಣ ಪತ್ರಗಳು ದೊರೆಯುತ್ತಿದ್ದವು ಅದಕ್ಕಾಗಿ ಸಾರ್ವಜನಿಕರು ಘಂಟೆ ಗಟ್ಟಲೆ ಸರತಿ ಸಾಲು ಹಚ್ಚಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿ ಇದರಿಂದ ಜನರಿಗೆ ತೊಂದರೆ ಆಗುತ್ತಿತ್ತು. ಇನ್ನು ಅನೇಕ ಬಾರಿ ಲಂಚ ಕೊಡಬೇಕಾದ ಪರಿಸ್ಥಿತಿ ಬರುತ್ತಿತ್ತು.
ಶಾಲೆಗೆ ಸೇರಲು ಶುಲ್ಕ ರಿಯಾಯತಿ ಪಡೆಯಲು, ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು, ವಿದ್ಯಾರ್ಥಿ ವೇತನ ಪಡೆಯುವುದಕ್ಕೆ, ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗೆ, ವೇತನ ಪಡೆಯಲು, ತೆರಿಗೆ ಕಟ್ಟುವುದಕ್ಕೆ ಹೀಗೆ ಹತ್ತು ಹಲವು ಕೆಲಸಗಳಿಗೆ ಜಾತಿ, ಆದಾಯ, ನಿವಾಸಿ ಪ್ರಮಾಣ ಪತ್ರಗಳು ಬೇಕಾಗುತ್ತಿದ್ದವು ಈ ಪ್ರಮಾಣ ಪಾತ್ರಕ್ಕಾಗಿ ರಜೆ ಹಾಕಬೇಕಾದ ಅನಿವಾರ್ಯತೆ ಬರುತ್ತಿತ್ತು.
ಈ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಈ ಪ್ರಮಾಣ ಪತ್ರಗಳ ಅರ್ಜಿಯನ್ನು ಆನ್ಲೈನ್ ಮಾಡಿದೆ. ಅದಕ್ಕಾಗಿ ನಮ್ಮ ರಾಜ್ಯದ ಗ್ರಾಮಲೆಕ್ಕಿಗರು ಪ್ರತಿಯೊಂದು ಮನೆಗಳಿಗೆ ಭೇಟಿ ಮಾಡಿ ರಾಜ್ಯದ 4 ಕೋಟಿ ಜನರ , 80ಲಕ್ಷ ಕುಟುಂಬದ ಜಾತಿ, ಆದಾಯ, ನಿವಾಸಿ ದೃಢೀಕರಣ ಆನ್‌ಲೈನ್‌ನಲ್ಲಿ ದಾಖಲು ಮಾಡಿದ್ದಾರೆ.
ನೆಟ್‌ ಬ್ಯಾಂಕಿಂಗ್‌ ಶುಲ್ಕ 15 ರೂ. ಬ್ಯಾಂಕ್‌ ಕಮಿಷನ್‌ 4.90 ರೂ. ಸೇರಿ ಒಟ್ಟು 20ರೂ. ಪಾವತಿಸಬೇಕಿದೆ. ಜಾತಿ ಪ್ರಮಾಣ ಪತ್ರ ಜೀವಿತಾವಧಿಯಲ್ಲಿ ಒಂದು ಸಾರಿ ಪಡೆದರೆ ಸಾಕು. ಆದಾಯ ಪ್ರಮಾಣ ಪಾತ್ರವನ್ನು ಪ್ರತಿ ಮೂರೂ ವರ್ಷಕ್ಕೆ ಒಂದು ಸಾರಿ ಪಡೆಯಬೇಕು.

Show More